ಕುಂಡಲಪುರ  

 ಮಧ್ಯಪ್ರದೇಶದ ಸಾಗರ ಜಿಲ್ಲೆಯಲ್ಲಿರುವ ಜೈನಕ್ಷೇತ್ರ. ಕುಂಡಲಾಕೃತಿಯಲ್ಲಿರುವ ಇಲ್ಲಿಯ ಬೆಟ್ಟದ ಮೇಲೆ ಅನೇಕ ಜಿನಮಂದಿರಗಳಿವೆ. ಮಹಾವೀರ ತೀರ್ಥಂಕರ ಕುಂಡಲಪುರದಲ್ಲಿ ಜನಿಸಿದನೆಂಬ ಒಂದು ಅಭಿಪ್ರಾಯವೂ ಉಂಟು.

 ಬಿಹಾರ ಪ್ರಾಂತ್ಯದಲ್ಲಿ ಪಾವಾಪುರಿ ಮತ್ತು ರಾಜಗೃಹದ ಮಾರ್ಗದ ನಡುವೆ ಒಂದು ಕುಂಡಲಪುರವಿದೆ. ಇದರ ಸಮೀಪದಲ್ಲಿ ನಾಲಂದ ವಿÀಶ್ವವಿದ್ಯಾನಿಲಯದ ಅವಶೇಷಗಳಿವೆ.   

 (ಬಿ.ಜಿ.)

 
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ